ಸುಮಾರು 35 ವರ್ಷಗಳ ಇತಿಹಾಸ ಹೊಂದಿರುವ ಈ ಸಹಕಾರ ಸಂಘವು 1991ನೇ ವರ್ಷದಲ್ಲಿ ನೋಂದಣಿ ಸಂಖ್ಯೆ : UBC:UOG:81:17324:90-91. 1959ರ ಮೇರೆಗೆ ನೊಂದಾಯಿಸಲ್ಪಟ್ಟು, ಪ್ರತಿವರ್ಷವು ಅಭಿವೃದ್ಧಿ ಪಥದಲ್ಲಿ ದಾಪುಗಾಲು ಹಾಕುತ್ತಿರುವ ಈ ಸಹಕಾರ ಸಂಘದ ಆಡಳಿತ ಸಮಿತಿ ಪರವಾಗಿ ತಮ್ಮೆಲ್ಲರನ್ನು ಇಂದು ನಡೆಯುತ್ತಿರುವ 33ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಗೆ ಹಾರ್ಧಿಕವಾಗಿ ಸ್ವಾಗತಿಸಿ, ಆಡಳಿತ ವರದಿ ಮಂಡಿಸಲು ನನಗೆ ತುಂಬಾ ಸಂತೋಷವಾಗುತ್ತದೆ.
ಸಂಘದ ಲೆಕ್ಕಪತ್ರಗಳನ್ನು ಸಂಪೂರ್ಣವಾಗಿ ಗಣಕೀರಣಗೊಳಿಸುವ ನಿಟ್ಟಿನಲ್ಲಿ ಸಾಫ್ಟ್ವೇರ್ ಅಳವಡಿಸಿಕೊಂಡಿದ್ದು, ಈಗಾಗಲೇ ಎಲ್ಲಾ ಕಛೇರಿಗಳಿಗೆ ಕಂಪ್ಯೂಟರ್ ಮುಖೇನ ಸಾಲ ಮುರಿಕೆ ವಿವರದ ತ:ಖ್ತೆ ಕಳುಹಿಸಲಾಗುತ್ತಿದೆ ಎಲ್ಲಾ ವಿವಿಧ ಕಾರ್ಯಗಳನ್ನು ಗಣಕೀಕರಣ ಮುಖೇನ ನಡೆಸಲಾಗುತ್ತಿದೆ. ಸದಸ್ಯರ ಲೆಕ್ಕಗಳಲ್ಲಿ ಯಾವುದೇ ತಪ್ಪುಗಳಿಗೆ ಆಸ್ಪದವಾಗದಂತೆ ಗಣಕೀಕರಣದ ಮೂಲಕ ಹೆಚ್ಚಿನ ಮುತುವರ್ಜಿವಹಿಸಿ ನಡೆಸಲಾಗುತ್ತಿದೆ.
ಹಾಲಿ PUNJAB NATIONAL BANK, BHEL MYSORE ROAD ಶಾಖೆಯಲ್ಲಿ ಚಾಲ್ತಿ ಖಾತೆ ತೆರೆದಿರುವುದರಿಂದ ರಾಜ್ಯದ ಯಾವ ಮೂಲೆಯಲ್ಲಿರುವ ಸದಸ್ಯರು ನೇರವಾಗಿ ಈ ಖಾತೆಗೆ ಸಾಲದ ಕಂತನ್ನು ಪಾವತಿಸಬಹುದಾಗಿದೆ. ಇದರಿಂದ ಸದಸ್ಯರ ಮೇಲಿನ ಹೆಚ್ಚಿನ ಬಡ್ಡಿ ಹೊರೆಯನ್ನು ತಪ್ಪಿಸಿ, ಸಕಾಲದಲ್ಲಿ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.
ಆಧುನಿಕ ಯುಗದಲ್ಲಿ ಕಛೇರಿಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ದೃಷ್ಟಿಯಿಂದ ಕಛೇರಿಗಳನ್ನು ಆಧುನಿಕರಣಗೊಳಿಸುವುದು ಅತ್ಯವಶ್ಯವಾಗಿದೆ. ಸಂಘದ ಕಛೇರಿಯನ್ನೂ ಸಹ ಆಧುನೀಕರಣಗೊಳಿಸಿ, ಶೀಘ್ರವಾಗಿ ಕಛೇರಿ ಕೆಲಸಗಳು ಸುಸೂತ್ರವಾಗಿ ನಡೆಸಲು ಅನುಕೂಲ ಕಲ್ಪಿಸಲಾಗಿದೆ. ಅಲ್ಲದೆ, ಅಂತರ್ಜಾಲ ಸಂಪರ್ಕದ ಮೂಲಕ ಸಾಲ ಮುರಿಕೆ ತ:ಖ್ತೆಯನ್ನು ಸಂಬಂಧಿಸಿದ ACCOUNTS ಕಛೇರಿಯ ತಪಾಸಕರ ಇ ಮೇಲ್‌ಗೆ ಕಳುಹಿಸಲಾಗುತ್ತಿದೆ. ಇದರಿಂದ ಕಛೇರಿಗಳಿಂದ ಶೀಘ್ರವಾಗಿ ಸಾಲವಸೂಲಾತಿಗೆ ಸಾಧ್ಯವಾಗಲಿದೆ.
ಸಂಘದ ಸುಸ್ತಿದಾರರ ಬಗ್ಗೆ ಆಡಳಿತ ಮಂಡಲಿಯು ಕಠಿಣ ನಿರ್ಧಾರಗಳನ್ನು ಕೈಗೊಂಡು ಸುಸ್ತಿದಾರರ ಸಂಖ್ಯೆಯನ್ನು ಕಡಿಮೆಗೊಳಿಸಲು ಶ್ರಮಿಸುತ್ತಿದೆ. ಹಾಲಿ ಸಂಘದಲ್ಲಿ ಸಂಘದ ಷೇರು ಮತ್ತು ತೀಫ್ಟ್ ಹಣದಿಂದಲೇ ಸಂಘವನ್ನು ಉನ್ನತಮಟ್ಟಕ್ಕೆ ಕೊಂಡೊಯ್ಯಲು ಸಾಧ್ಯವಾಗಿದೆ.
ಎಲ್ಲ ಬಟವಾಡೆ ಅಧಿಕಾರಿಗಳು ಸದಸ್ಯರುಗಳ ಉಳಿತಾಯ ಮತ್ತು ಸಾಲ ಮುರಿಕೆಯನ್ನು ವಿಷಯ ನಿರ್ವಾಹಕರ ಮುಖೇನ ಹೆಚ್.ಆರ್.ಎಂ.ಎಸ್. ನಲ್ಲಿ ಅಳವಡಿಸಿ ಮುರಿಕೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ಕೋರಿದೆ ಹಾಗೂ ಈ ನಿಟ್ಟಿನಲ್ಲಿ ಸಂಘವು ಸಹಕರಿಸಲು ಸಿದ್ಧವಾಗಿರುತ್ತದೆ.
ಇಲಾಖೆಯ ಎಲ್ಲಾ ಅಧಿಕಾರಿಗಳು ಸಂಘದೊಂದಿಗೆ ಸಹಕರಿಸಿ, ಸಂಘದ ಕೋರಿಕೆಯಂತೆ ಸದಸ್ಯರಿಂದ ಸಾಲದ ಕಂತನ್ನು ವಸೂಲಿ ಮಾಡಿ ಸಕಾಲಕ್ಕೆ ಕಳುಹಿಸುತ್ತಿರುವುದರಿಂದ ಸಂಘವು ಅವರಿಗೆ ಹೃದಯಪೂರ್ವಕ ಅಭಿನಂದನೆಗಳನ್ನು ಅರ್ಪಿಸುತ್ತದೆ. ಅಲ್ಲದೆ ಇ.ಸಿ.ಎಸ್. ಅಳವಡಿಸಿಕೊಂಡು ಸಾಲ ವಸೂಲಿ ಬಗ್ಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಸಹಕರಿಸುವಂತೆ ಕೋರಿದೆ. ಅಲ್ಲದೆ, ಸಾಲ ವಸೂಲಿ ಮಾಡದೇ ಇರುವ ಕಛೇರಿಯ ಮುಖ್ಯಸ್ಥರು ಇನ್ನು ಮುಂದೆ ಸದಸ್ಯರ ವೇತನದಲ್ಲಿ ಸಾಲವನ್ನು ಮುರಿಕೆ ಮಾಡಿ ಸಂಘಕ್ಕೆ ಪಾವತಿಸುವ ಮೂಲಕ ಸಾಲ ವಸೂಲಾತಿ ಹೆಚ್ಚಿಸಿ ಸಂಘದ ಅಭಿವೃದ್ಧಿಗೆ ಸಹಕರಿಸುವಂತೆ ವಿನಯಪೂರ್ವಕವಾಗಿ ಕೋರುತ್ತೇನೆ.
ಮಾನ್ಯ ಆಯುಕ್ತರನ್ನು ಒಳಗೊಂಡು ಇಲಾಖೆಯ ಹಿರಿಯ ಅಧಿಕಾರಿಗಳ ಸಲಹೆ ಸಹಕಾರಕ್ಕಾಗಿ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸುವುದರೊಂದಿಗೆ ಎಲ್ಲರಿಗೂ ಮತ್ತೊಮ್ಮೆ ವಂದನೆಗಳನ್ನು ಸಲ್ಲಿಸುತ್ತೇನೆ. ತಾವೆಲ್ಲರೂ ಉತ್ಸಾಹಪೂರ್ವಕವಾಗಿ ಸಹಕಾರ ಮನೋಭಾವದಿಂದ ನೀಡಲಾಗುತ್ತಿರುವ ಬೆಂಬಲ ಮತ್ತು ಪ್ರೋತ್ರಾಹಕ್ಕೆ ಸಂಘದ ಆಡಳಿತ ಸಮಿತಿ ಸದಸ್ಯರು ಅಭಾರಿಗಳಾಗಿರುತ್ತಾರೆ.